Index   ವಚನ - 88    Search  
 
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು. ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು. ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು. ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ. ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರಾ.