Index   ವಚನ - 24    Search  
 
ಅಡಗಿದ ಕಿಚ್ಚು ಉರಿದಾಗವೆ ತನ್ನ ಇರವು ನಷ್ಟ. ತುರೀಯದ ಮೋಹ ಬೆರಸಿದಾಗವೆ ಆ ತುರೀಯ ನಷ್ಟ. ಇಷ್ಟದ ಮೇಗಣ ಚಿತ್ತ ಅಭಿ[ವಾ]ರ್ಥವೆಂಬ ಗುಟ್ಟ ಬಿಟ್ಟಲ್ಲಿಯೆ ನಿಜನಿಶ್ಚಯ. ಆ ನಿಶ್ಚಯ ಅಚ್ಚೊತ್ತುವುದಕ್ಕೆ ಮುನ್ನವೆ, ಸಶ್ಚಿತ್ತವಾದ[ಲ್ಲಿಯೆ] ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.