Index   ವಚನ - 74    Search  
 
ಅ ಖಂಡವ ಕೊಯ್ದು ಉಂಡವ ಭಕ್ತ, ಕೊಂಡವ ಮಾಹೇಶ್ವರ, ಕೊಂಡವನ ಕೊಂದು, ಖಂಡವ ಕೊಯ್ದವ ಪ್ರಸಾದಿ, ಅದರ ಸಂದ ಮುರಿದವ ಪ್ರಾಣಲಿಂಗಿ, ಆನಂದಿಸಿದವನ ಕೊಂದು ಹಿಂಡೆಯ ಕೂಳನುಂಡವ ಶರಣೈಕ್ಯ, ಇದರಂದದ ಏಕ್ಯವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.