Index   ವಚನ - 132    Search  
 
ಉಡುಪ ತನ್ನ ಕಳೆಯ ತಾ ಕಾಣಿಸಿಕೊಂಬಂತೆ, ಸೂರ್ಯ ತನ್ನ ಬೆಳಗ ತಾ ಕಾಣಿಸಿಕೊಂಬಂತೆ, ಫಲ ತನ್ನ ರುಚಿಯ ತಾ ಕಾಣಿಸಿಕೊಂಬಂತೆ, ಇಂತೀ ತ್ರಿವಿಧ ಉಂಟೆನಬಾರದು, ಇಲ್ಲೆನಬಾರದು. ತನ್ನಿಂದರಿವಡೆ ಸ್ವತಂತ್ರಿಯಲ್ಲ, ಇದಿರಿನಿಂದರಿವಡೆ ಪರತಂತ್ರಿಯಲ್ಲ. ಈ ಉಭಯವನಿನ್ನಾರಿಗೆ ಹೇಳುವೆ ? ಕಡಲೊಳಗೆ ಕರೆದ ವಾರಿಯಂತೆ, ನಿಃಕಳಂಕ ಮಲ್ಲಿಕಾರ್ಜುನಾ.