Index   ವಚನ - 164    Search  
 
ಎನ್ನ ತನುವಿನಲ್ಲಿ ಗುರುಮೂರ್ತಿ ಸಂಗನಬಸವಣ್ಣನ ಕಂಡೆನು. ಎನ್ನ ಮನದಲ್ಲಿ ಲಿಂಗಮೂರ್ತಿ ಚನ್ನಬಸವಣ್ಣನ ಕಂಡೆನು. ಎನ್ನ ಭಾವದಲ್ಲಿ ಜಂಗಮಮೂರ್ತಿ ಸಿದ್ಧರಾಮಯ್ಯನ ಕಂಡೆನು. ಎನ್ನ ತೃಪ್ತಿಮುಖದಲ್ಲಿ ಪ್ರಸಾದಮೂರ್ತಿ ಮರುಳಶಂಕರದೇವರ ಕಂಡೆನು. ಎನ್ನ ಅರಿವಿನ ಮುಖದಲ್ಲಿ ನೈಷ್ಠಿಕಾಮೂರ್ತಿ ಮಡಿವಾಳಯ್ಯನ ಕಂಡೆನು. ಎನ್ನ ಹೃದಯಮುಖದಲ್ಲಿ ಜ್ಞಾನಮೂರ್ತಿ ಪ್ರಭುದೇವರ ಕಂಡೆನು. ಇಂತೀ ಷಟ್‍ಸ್ಥಲವ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠೆಯ ಮಾಡಿ ತೋರಿದ ನಿಃಕಳಂಕ ಮಲ್ಲಿಕಾರ್ಜುನಾ, ನಿಮ್ಮ ಶರಣರ ಕಂಡು, ಪರಮಸುಖಿಯಾಗಿರ್ದೆನು.