ಏಕಜಲ ಬಹುಜಲವಾದ ಕ್ರಮವನರಿವುದು. ಅದಕ್ಕೆ ದೃಷ್ಟ;
ಅನಾದಿಯ ಪ್ರಣವನರಿಯದೆ, ಹಾದಿಯ ಕಲ್ಲ ಪೂಜಿಸಿದರಯ್ಯಾ,
ಸಂಸಾರಕ್ಕೆ ಬೋಧೆಗೆ ಸಿಕ್ಕಿರೆ
ಅನಾಗತಸಿದ್ಧಿಯ ಹೋದ ಹೊಲಬನರಿಯದೆ ಕೆಟ್ಟರಯ್ಯಾ.
ಅಂಧಕಂಗೆ ಚಂದಾದ ಮುಖವುಂಟೆ ?
ಶೃಂಗಾರ ಪಂಗುಳಂಗೆ ಯೋಜನದ ಸುದ್ದಿಯಿಲ್ಲ.
ಲಿಂಗವನರಿಯದಂಗೆ ಜಗದ ಹಂಗಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ēkajala bahujalavāda kramavanarivudu. Adakke dr̥ṣṭa;
anādiya praṇavanariyade, hādiya kalla pūjisidarayyā,
sansārakke bōdhege sikkire
anāgatasid'dhiya hōda holabanariyade keṭṭarayyā.
Andhakaṅge candāda mukhavuṇṭe?
Śr̥ṅgāra paṅguḷaṅge yōjanada suddiyilla.
Liṅgavanariyadaṅge jagada haṅgilla,
niḥkaḷaṅka mallikārjunā.