Index   ವಚನ - 204    Search  
 
ಕಟ್ಟಿಗೆ ಕಸ ನೀರ ಹೊತ್ತು ಭಕ್ತರನ್ನಲ್ಲದೆ ಬೇಡೆನೆಂದು, ಅವರು ಕರ್ತೃ, ನಾನು ತೊತ್ತೆಂದು, ಅವರು ಒಕ್ಕುದನಿಸಿಕೊಂಡು ಬಂದು, ತನ್ನ ಕೃತ್ಯದ ನೇಮ ತಪ್ಪದೆ, ಆಗವೆ ತನ್ನ ಸತಿ ಸುತ ಬಂಧು ದೇವರು ಮುಂತಾಗಿ ಲಿಂಗಾರ್ಚನೆ ಮಾಡಬೇಕಲ್ಲದೆ, ಇಂದಿಂಗೆ ನಾಳಿಂಗೆಂದು ಸಂದೇಹವ ಮಾಡಿದಡೆ, ಲಿಂಗಕ್ಕೆ ದೂರ, ಜಂಗಮಕ್ಕೆ ಸಲ್ಲ, ಪ್ರಸಾದವಿಲ್ಲ. ಇದಕ್ಕೆ ಸೋಲ ಬೇಡ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆ ಸಾಕ್ಷಿ.