Index   ವಚನ - 250    Search  
 
ಕಾಲಜ್ಞಾನ, ಕರ್ಮಜ್ಞಾನ, ಭಾವಜ್ಞಾನ ಭ್ರಮೆಯಳಿದು, ನಾ, ನೀನೆಂಬ ಮದ ಮತ್ಸರ ಮುರಿದು, ಭಕ್ತಿಜ್ಞಾನವೈರಾಗ್ಯವೆಂಬ ಸಂತೋಷವ ಮೆಟ್ಟಿನಿಂದು, ನಿಜವೆ ತಾನಾಗಿರ್ಪ ಪರಿಪೂರ್ಣಂಗೆ ಇಹ ಪರವೆಂಬ ಉಭಯದವನಲ್ಲ. ಇಂತೀ ಪರಂಜ್ಯೋತಿ ಪ್ರಕಾಶಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.