Index   ವಚನ - 268    Search  
 
ಕುಸುಮ ಗಂಧವ ಉಪದೃಷ್ಟದಿಂದ ಹೊರೆವಂತೆ, ಕಿಸಲಯದ ಘೃತ, ಅದು ತನ್ನ ಎಸಳದಿಂದ ಬಂಧ ಬಿಡುವಂತೆ, ರಸಿಕರ ವಿವೇಕವ ಹೊಸ ನವನೀತದಲ್ಲಿ ನಿಶಿತ ಅಳಕವ ತೆಗೆದಂತೆ, ಆವಾವ ಸ್ಥಲವ ವೇಧಿಸಿದಲ್ಲಿ, ಭಾವಕ್ಕೆ ಭ್ರಮೆಯಿಲ್ಲದೆ, ಉಭಯಕ್ಕೆ ನೋವು ಇಲ್ಲದೆ, ಭಾವ ನಿರ್ಭಾವವಾಗಬೇಕು. ಆತ ಷಟ್ಸ್ಥಲವೇದಿ, ಉಭಯಸ್ಥಲಭರಿತ, ಸರ್ವಸ್ಥಲಸಂಪೂರ್ಣ, ಸರ್ವಭಾವ ಲೇಪ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಉಭಯಸ್ಥಲಲೇಪವಾದ ಶರಣ.