Index   ವಚನ - 348    Search  
 
ಜಂಗಮವೆಂದು ಮಾಡಿ ಪಂಕ್ತಿಯಲ್ಲಿ ವಿಂಗಡಿಸಿ, ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.