ಪೂರ್ವಧಾತುವಿನ ಮೋಹ, ಉತ್ತರಧಾತುವಿನ ನಿರ್ಮೋಹ,
ಉಭಯದ ಕಕ್ಷೆಯ ತಿಳಿದು ಅರಿದಲ್ಲಿ,
ಅರಿದು ಮರೆದಲ್ಲಿ, ಮತ್ತೇತರ ದರಿಸಿನ ?
ಇಂತೀ ಗುಣವ ಸಂದೇಹಕ್ಕೆ ಇಕ್ಕಿ, ಬೇರೊಂದರಲ್ಲಿ ನಿಂದು ಕಂಡೆಹೆನೆಂದಡೆ,
ಉಭಯಲಿಂಗದಂಗ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Pūrvadhātuvina mōha, uttaradhātuvina nirmōha,
ubhayada kakṣeya tiḷidu aridalli,
aridu maredalli, mattētara darisina?
Intī guṇava sandēhakke ikki, bērondaralli nindu kaṇḍ'̔ehenendaḍe,
ubhayaliṅgadaṅga ondū illa, niḥkaḷaṅka mallikārjunā.