Index   ವಚನ - 529    Search  
 
ಬಾಲಲೀಲೆಯಲ್ಲಿ ಕಟ್ಟಿದ ಲಿಂಗವನೇನೆಂದರಿಯದಿರ್ದಲ್ಲಿ, ಜ್ಞಾನಭಾವ ತಲೆದೋರಿದಲ್ಲಿ ಇದೇನೆಂದರಿಯಬೇಕು. ಮಕ್ಕಳ ಮದುವೆಯ ಚಿಕ್ಕಂದು ಮಾಡಿದಡೆ, ಯೌವನದೋರೆ, ಆ ವಿಷಯಕ್ಕೆ ಹೊಕ್ಕು, ಹೋರಟೆಗೊಂಬುದ ಮರೆದಡೆ, ಇಷ್ಟವ ಮರೆಯಬೇಕು, ನಿಃಕಳಂಕ ಮಲ್ಲಿಕಾರ್ಜುನಾ.