Index   ವಚನ - 555    Search  
 
ಭಕ್ತಂಗೆ ಭಕ್ತಸ್ಥಲ, ಮಹೇಶ್ವರಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಪ್ರಸಾದಿಸ್ಥಲ, ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಶರಣಸ್ಥಲ, ಐಕ್ಯಂಗೆ ಮಹದೈಕ್ಯಸ್ಥಲ. ಇಂತೀ ಈರಾರ ಭೇದಮಿಶ್ರಂಗಳು ಕೂಡಿ, ತತ್ವವೊಂದರಲ್ಲಿ ಎಯ್ದಿ, ಆ ವಸ್ತುವಿಗೆ ಒಂದೆ ವಿಶ್ವಾಸದಲ್ಲಿ ಸಂಭವಿಸಿ ಲೇಪವಾಯಿತ್ತು. ಇಂತೀ ಗುಣಸ್ಥಲ ಲೇಪ ಐಕ್ಯ. ನಿಃಕಳಂಕ ಮಲ್ಲಿಕಾರ್ಜುನ ನಾಮವಡಗಿದ ನಿರ್ನಾಮಭೇದ.