ಭಕ್ತಿ ಮಂದಿರದಲ್ಲಿ ಪೂಜಿಸಿಕೊಂಬ ಜಂಗಮವ ನೋಡಾ,
ಅಯ್ಯಾ. ಜಂಗಮವೆಂಬುದಕ್ಕೆ ನಾಚರಯ್ಯಾ.
ಭಕ್ತರ ಮಂದಿರಕ್ಕೆ ಹೂ ಕಾಯಿ ಹಣ್ಣು ಹುಲ್ಲು ಹೊರೆ ಬೊಕ್ಕಸ
ಪಹರಿ ಪಾಡಿತನ ಬಾಗಿಲು ಮುಂತಾಗಿ ಶುಶ್ರೂಷೆಯಂ ಮಾಡಿ ಉಂಬಾಗ,
ಒಡೆಯರೆನಿಸಿಕೊಂಬ ತುಡುಗುಣಿಗೆಲ್ಲಿಯದೊ, ನಿಜಜಂಗಮಸ್ಥಲ ?
ಹೊಟ್ಟೆಯ ಕಕ್ಕುಲತೆಗೆ ಕಷ್ಟಜೀವವ ಹೊರೆವ
ಹೆಬ್ಬೊಟ್ಟೆಯ ಡೊಂಬರ ಕಂಡು, ಬಟ್ಟಬಯಲಾದೆಯಾ,
ನಿಃಕಳಂಕ ಮಲ್ಲಿಕಾರ್ಜುನಾ?
Art
Manuscript
Music
Courtesy:
Transliteration
Bhakti mandiradalli pūjisikomba jaṅgamava nōḍā,
ayyā. Jaṅgamavembudakke nācarayyā.
Bhaktara mandirakke hū kāyi haṇṇu hullu hore bokkasa
pahari pāḍitana bāgilu muntāgi śuśrūṣeyaṁ māḍi umbāga,
oḍeyarenisikomba tuḍuguṇigelliyado, nijajaṅgamasthala?
Hoṭṭeya kakkulatege kaṣṭajīvava horeva
hebboṭṭeya ḍombara kaṇḍu, baṭṭabayalādeyā,
niḥkaḷaṅka mallikārjunā?