ಭೇರಿಯು ಈರಹವಾದಲ್ಲಿ ಅದಿರಲ್ಲದೆ ಸುನಾದವಿಲ್ಲ.
ಪಾಷಾಣದ ಬೆಳಗು ಮೀರಿ[ದ]ಲ್ಲದೆ ರತ್ನವಲ್ಲ.
ಇಂತೀ ವರ್ಮಭೇದವೆಂತುಟೆಂದಡೆ,
ಭೇರಿಯಿದ್ದಲ್ಲದೆ ನಾದಕ್ಕೆ ಸಾಕಾರವಿಲ್ಲ.
ಪಾಷಾಣವಿದ್ದಲ್ಲದೆ ದೀಪ್ತಿಗೆ ತೋರಲೊಡಲಿಲ್ಲ.
ಕ್ರಿಯಾಶುದ್ಧಾತ್ಮನಾಗಿಯಲ್ಲದೆ,
ವಿರಕ್ತಿಯನರಿವುದಕ್ಕೊಡಲಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhēriyu īrahavādalli adirallade sunādavilla.
Pāṣāṇada beḷagu mīri[da]llade ratnavalla.
Intī varmabhēdaventuṭendaḍe,
bhēriyiddallade nādakke sākāravilla.
Pāṣāṇaviddallade dīptige tōraloḍalilla.
Kriyāśud'dhātmanāgiyallade,
viraktiyanarivudakkoḍalillavende, niḥkaḷaṅka mallikārjunā.