Index   ವಚನ - 647    Search  
 
ಮಾಯೆ ತನ್ಮಯವೆಂಬ ಭವಜನ್ಮದಲ್ಲಿ ಬಂದು, ಗೋರಸವನೆ ಉಂಡು ನಾಚದೇಕೆ ಮನ ? ಹೇಸದೇಕೆ ಮನ ? ತಿತ್ತಿಯ ಹಿಡಿದ ಮಾದಿಗನಿಗೆ, ಹೊತ್ತಿದ ಮೂಗಿನ ನಾತ ನಿಶ್ಚಯವುಂಟೆ, ಇತ್ತಣವರಿಗಲ್ಲದೆ ? ಕಚ್ಚಿದವನಿಗೆ ಸುಖಸಂಸಾರವೆಂಬಡಗುಮಾಯೆ, ಮತ್ತತನದಿಂದ ಕೊಂದಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.