Index   ವಚನ - 665    Search  
 
ರಸರುಚಿಸುವಲ್ಲಿ, ಗಂಧ ವಾಸಿಸುವಲ್ಲಿ, ರೂಪು ನೋಡುವಲ್ಲಿ, ಶಬ್ದ ಕೇಳುವಲ್ಲಿ, ಸ್ಪರ್ಶ ಮುಟ್ಟುವಲ್ಲಿ. ಇಂತೀ ಐದರ ಮುಖದಲ್ಲಿ, ಅರ್ಪಿಸಿಕೊಂಬವನಾರೆಂಬುದನರಿತು, ಬಂಗಾರದ ಹಲವು ತೆರದ ಆಭರಣವ ಸ್ವಸ್ಥಾನಂಗಳಲ್ಲಿ ಶೃಂಗರಿಸುವುದು, ಘಟದಂದಚೆಂದವಲ್ಲದೆ ಆತ್ಮಂಗೊಂದೆ ವಿಲಾಸಿತ. ತನ್ನಭೀಷ್ಟೆಯ ತಾನರಿದು, ಲೀಲೋಲ್ಲಾಸತೆಯನೆಯ್ದುವಂತೆ, ಲೌಕಿಕಕ್ಕೆ ಕ್ರೀಭರಿತನಾಗಿ, ಭಾವಕ್ಕೆ ಸತ್ಕ್ರೀವಂತನಾಗಿ, ಜ್ಞಾನಕ್ಕೆ ಸರ್ವಸಂತುಷ್ಟನಾಗಿ, ರಾಗವಿರಾಗಿಯಾಗಿ, ನಿಜದಲ್ಲಿ ನಿಂದಾತನೆ ಪ್ರಾಣಲಿಂಗ ಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.