Index   ವಚನ - 669    Search  
 
ರುದ್ರದೈವವೆಂದಡೆ ಅರ್ಧನಾರಿಗೆ ಸಿಕ್ಕಿದ. ಚಿದ್ರೂಪ ದೈವವೆಂದಡೆ ಹೊದ್ದಿಹುದಕ್ಕೆ ರೂಪಿಲ್ಲ. ಮತ್ತೆ ಮಹತ್ತಪ್ಪ ಘನವ ನೆನೆದೆಹೆನೆಂದಡೆ, ಮಾತಿಂಗೊಳಗಾಯಿತ್ತು. ಮತ್ತೆ ವಸ್ತುವ ಇನ್ನೇತರಿಂದ ಕಾಬೆ. ಗುರು ನರನಾದ, ಲಿಂಗ ಪಾಷಾಣವಾಯಿತ್ತು,ಜಂಗಮ ಆಶೆಕನಾದ. ಇವೆಲ್ಲವನರಿವ ಮನ ಬೀಜವಾಯಿತ್ತು, ಎನಗಿನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?