Index   ವಚನ - 676    Search  
 
ಲಿಂಗ ಪ್ರಾಣ, ಪ್ರಾಣ ಲಿಂಗವಾದ ನಿರಂಗನ ಇರವು ಹೇಗೆಂದಡೆ: ಉರಿಯೊಳಗಣ ಸರಮಣಿಯಂತೆ, ಧರೆಯೊಳಗಣ ಸುರತರುವಿನಂತೆ, ಕರಿಯೊಳಗಣ ಬರವಿನಂತೆ, ವರದೊಳಗಣ ಕರುಣದಂತೆ, ಸರಧಿಯೊಳಗಣ ಸಾರದಂತೆ. ಇಂತೀ ಭರದಲ್ಲಿ ತಿರುಗುವ ಸುಳುಹು ಅರಿಬಿರಿದಯ್ಯಾ. ಎನಗವರು ಭವರೋಗ ವೈದ್ಯರು. ಆ ಪರಾಪರ ಶಿವಮೂರ್ತಿ, ಪರಬ್ರಹ್ಮಗುರು ತಾನೆ, ನಿಃಕಳಂಕ ಮಲ್ಲಿಕಾರ್ಜುನ.