Index   ವಚನ - 682    Search  
 
ಲಿಂಗವಿದ್ದು ಇದಿರಿಂಗೆ ಕೊಟ್ಟ ಕಾರಣ ಗುರುವಾದ. ಆ ಗುರು ಸನ್ಮತವಾಗಿ ಹರಸ್ವರೂಪವ ಮಾಡಲಾಗಿ ಜಂಗಮವಾದ. ಇಂತೀ ಲಿಂಗ ಬೀಜ ಅಂಕುರಿಸಿ ಎರಡಾಯಿತ್ತು. ತಾ ಕುರಿತು ಮೂರಾಯಿತ್ತು. ಮೂರು ಆರಾದ ಭೇದವ ಉಪಮಿಸಲಿಲ್ಲ. ವಿಶ್ವಮಯನಾಗಿ, ವಿಶ್ವಾಸಕ್ಕೆ ಒಡಲಾಗಿ, ಪ್ರಣವ ಬೀಜವಾಗಿ, ಉತ್ಪತ್ಯ ಲಯಕ್ಕೆ ಕರ್ತರ ಕೊಟ್ಟು, ಮಿಕ್ಕಾದ ತತ್ವಗಳಿಗೆ ಎಲ್ಲರಿಗೆ ಹಂಚಿ ಹಾಯಿಕಿ, ಅವು ಯಂತ್ರವಾಗಿ, ಯಂತ್ರವಾಹಕವಾಗಿ, ಜಲದಿಂದಾದ ಮಲವ ಮತ್ತೆ ಜಲ ತೊಳೆವಂತೆ, ನಿನ್ನ ಲೀಲೆಗೆ ನೀನೆ ಹಂಗಾದೆಯಲ್ಲ. ಅ[ಲ್ಲಿಗೆ] ಮಲವಾಗಿ ಎನ್ನಲ್ಲಿಗೆ ಅಮಲವಾಗಿ, ಪಾಶಬದ್ಧ ವಿರಹಿತನಾದ, ನಿಃಕಳಂಕ ಮಲ್ಲಿಕಾರ್ಜುನ.