Index   ವಚನ - 726    Search  
 
ಸಡಗರಿಸುವಲ್ಲಿ ಲಿಂಗವ ನೆನೆದು, ಕಡುದುಃಖ ಬಂದಲ್ಲಿ ಲಿಂಗವ ಮರೆದು, ಇಂತೀ ಅಂಗಲಿಂಗಸಂಗವ ಮಾಡುವ ಪರಿಯಿನ್ನೆಂತೊ? ಕೂರ್ತಡೆ ಭಕ್ತ, ತಾಪತ್ರಯಕ್ಕೆ ಪಾಪಿಯೆ? ಇಂತೀ ಸುಖದುಃಖವೆಂಬ ಉಭಯವ ಭೇದಿಸಿ ನಿಂದವಂಗೆ, ಸುಖನಿಶ್ಚಯದಿಂದ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.