ಹೊರಗಣ ಮಾತ ಹೇಳಿ, ಒಳಗು ಶುದ್ಧವನರಿಯದೆ,
ಕೂಷ್ಮಾಂಡ ಕೊಳೆತಂತೆ ಬಯಲ ಬಹಿರೂಪವಂ ತೊಟ್ಟು,
ಹಿರಿಯರು, ವಿರಕ್ತರೆಂದು ಹೆಣ್ಣು ಹೊನ್ನು ಮಣ್ಣಿಗಾಗಿ
ಜಗದ ಹುದುವಿನ ಒಡವೆಗೆ ಹೊಡೆದಾಡಲೇಕೆ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Horagaṇa māta hēḷi, oḷagu śud'dhavanariyade,
kūṣmāṇḍa koḷetante bayala bahirūpavaṁ toṭṭu,
hiriyaru, viraktarendu heṇṇu honnu maṇṇigāgi
jagada huduvina oḍavege hoḍedāḍalēke,
niḥkaḷaṅka mallikārjunā?