ಹೊಲದವರೆಯ ನಡೆದು ಸೊಡಗೆಯ ಸುಲಿದಲ್ಲಿ,
ತಳಿಲು ಬಲಿದು ಒಡೆದುದಿಲ್ಲ.
ಬಿತ್ತವಟ್ಟಕ್ಕೆ ಮೊದಲೆ ಕೂಳೆಹೋಯಿತ್ತು.
ಹೊಲದವನಿಗೆ ಒಮ್ಮನವಾದುದಿಲ್ಲ.
ಇಮ್ಮನ ಸೊಡಗೆಯ ಮೆದ್ದು,ಕರ್ಮಕ್ಕೀಡಾದವರ ನುಡಿಯೆಂದಡೆ,
ಎನ್ನ ಹಮ್ಮಿಗನೆಂಬರು.
ಅವರಿಗೆ ಹಾಕಿದ ಗಾಣ ಸಾಕು, ನಿಲ್ಲು,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Holadavareya naḍedu soḍageya sulidalli,
taḷilu balidu oḍedudilla.
Bittavaṭṭakke modale kūḷehōyittu.
Holadavanige om'manavādudilla.
Im'mana soḍageya meddu,karmakkīḍādavara nuḍiyendaḍe,
enna ham'miganembaru.
Avarige hākida gāṇa sāku, nillu,
niḥkaḷaṅka mallikārjunā.