Index   ವಚನ - 39    Search  
 
ಸತಿಗೆ ಸದ್ಗತಿ ತನ್ನ ಪತಿಯಿಂದಲಪ್ಪುದಲ್ಲದೆ ಅತಃಪರದೈವ ಇನ್ನುಂಟೇನಯ್ಯ? ಮಥನ ಇಬ್ಬರಿಗೆ ಮಾಯಾಸಂಸಾರದೊಳು ಮರ್ಕಟರಾದರು. ಮತಿಗೇಡಿ ಮನೆದೈವವಂ ಬಿಟ್ಟು ಮಾರ್ಗಗೆಟ್ಟು ವ್ರತನಾಶವು ರಥಮುರಿದು ಆ ಕ್ಷಣವಳಿವುದಾಕ್ಷಣ್ಯ ತಪ್ಪುವುದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.