Index   ವಚನ - 42    Search  
 
ಉದಯ ಅಸ್ತಮಯ ನದಿಯೊಳು ಮುಣುಗಿ ಗದಗದನೆ ನಡುಗಲು ಗರ್ಭಕೆ ವೈರವು. ಸುದ್ಧಮಂ ಮರದು ಸೂಕ್ಷ್ಮವಂ ತಿಳಿಯದೆ ಗದಬದಿಸಿ ಎಮ್ಮೆ ಮಡುವಿನೊಳು ಬಿದ್ದಂತೆ ವ್ಯರ್ಥ ಸ್ನಾನವು. ಪದರ ಆತ್ಮದೊಳು ಸೂಸಕವೆಂಬ ಅಘ ತಾ ಹಿಂಗದೆ ಮದ ಹೊಲೆಯಿಂದ ಮರ್ಕಟಜ್ಞಾನಿಯಾದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.