ಪಂಚಾಕ್ಷರಕೆ ಪ್ರಥಮ ಅಕ್ಷರವು ನಕಾರವು.
ಮಿಂಚಿನೊಳು ಮಳೆ ಸಿಡಿಲು ಗರ್ಜನೆ ಮಿಸುಕುವಂತೆ,
ಕಿಂಚಿತು ನಕಾರಾತ್ಮವ ತಿಳಿದ ಮಹಾತ್ಮಂಗೆ ಸಂಚಲ ಉಂಟೆ?
ಷಡಾಧಾರ ಸಾಧ್ಯ ಷಡುಚಕ್ರಂಗಳು
ಪಂಚಭೂತಾತ್ಮವೆ ಲಿಂಗಾತ್ಮ, ವಂಚನೆಯಿಲ್ಲದೆ ಅರ್ಪಿತ
ಅರ್ಪಿತದ ಭೇದವ ಕಂಡರೆ
ಕಂಡ ಬೆಳಗೆ ಬೆಳಗೆ ಕನ್ನಡಿಯಾದಂತೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.