Index   ವಚನ - 98    Search  
 
ರೂಪು ಸಂಪನ್ನನಾದಡೇನಯ್ಯ ಸ್ತ್ರೀಯರಿಗೆ ಭಾಜನವಾಯಿತ್ತು. ಗುಣ ಸಂಪನ್ನನಾದಡೇನಯ್ಯ ಭಾಜನವಾಯಿತ್ತು. ದ್ರವ್ಯ ಸಂಪನ್ನನಾದಡೇನಯ್ಯ ರಾಜರಿಗೆ ಭಾಜನವಾಯಿತ್ತು. ಖಡ್ಗ ಸಂಪನ್ನನಾದಡೇನಯ್ಯ ರಣಾಗ್ರಕ್ಕೆ ಭಾಜನವಾಯಿತ್ತು. ತ್ಯಾಗ ಸಂಪನ್ನನಾದಡೇನಯ್ಯ ಯಾಚಕರಿಗೆ ಭಾಜನವಾಯಿತ್ತು. ಬಸವಣ್ಣ ನಿಮ್ಮ ಭಕ್ತಿ ಸಂಪನ್ನನಾದ ಕಾರಣದಿಂದ ಸ್ವಯಲಿಂಗಿಯಾದೆನು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.