Index   ವಚನ - 109    Search  
 
ಹಾರುವ ಹಾರೈದ ತನ್ನೊಳು ದೂರವಿಲ್ಲ ಹೊಲೆ ನಿಷೇಧ ತನ್ನೊಳು ಆರಂಭಗೈತ ವಿಷಯ ತನ್ನೊಳು ಮಾರಾಟ ಮಾತಿನ ಮಾಲೆ ಬಣಜಿಗ ತನ್ನೊಳು ಸೀರೆಯ ನೆಯ್ವ ಜಾಡ ದೇವಾಂಗ ತನ್ನೊಳು ಮಾರುವ ಕುಂಬಾರ ಆಹಾರ ದೇಹಾರ ತನ್ನೊಳು ಕರಿಯ ಪಂಚಾಳ ನಿರ್ಮಿತ ಪಂಚವಿಷಯ ತನ್ನೊಳು ಬೇರಯಿಲ್ಲ ಕುರುಬ ಹೆಡ್ಡು ಹೇಕುಳಿ ತನ್ನೊಳು ನೂರೊಂದು ಕಾಯ ತನ್ನೊಳು, ಕುಲವು ತನ್ನೊಳು ತೋರಿದರೆ ವಿಶ್ವವ ತೋರಬಹುದು ಆತ್ಮವ ಹೊಂದಿದಧ್ಯಾತ್ಮ ತನ್ನೊಳು ಕಾರ್ಯ ಕಾರಣಕ್ಕೆ ಕುತರ್ಕವಿಲ್ಲದೆ ಕೂಡುವುದು ಐಕ್ಯಸ್ಥಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.