ಶೀಲಸಂಪಾದನೆ ಸಮರ್ಪಣ:
ಅರಿವನರಿತೆನೆಂಬಲ್ಲಿ ಮರೆದುದೇನು ಅರಿವೋ ಮರವೆಯೋ?
ಉಭಯದಲ್ಲಿ ಶರೀರ ನಿಂದು ಇಪ್ಪುದು,
ಬಿಂದುವೋ? ನಾದವೋ? ಕಳೆಯೋ? ಎಂಬುದನರಿದಲ್ಲಿ
ಅರಿವಿನ ಸಂದೇಹ ನಿಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
Art
Manuscript
Music
Courtesy:
Transliteration
Śīlasampādane samarpaṇa:
Arivanaritenemballi maredudēnu arivō maraveyō?
Ubhayadalli śarīra nindu ippudu,
binduvō? Nādavō? Kaḷeyō? Embudanaridalli
arivina sandēha nindittu.
Īśān'yamūrti mallikārjunaliṅgavu svayambhuvāda.