Index   ವಚನ - 113    Search  
 
ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ. ಸುಖದುಃಖಾದಿಗಳ ಮೀರುವ ನಿನ್ನವರ ಕಾಣೆ. ಇನ್ನೇನು ಹೇಳುವೆ? ನಡುಹೊಳೆಯಲ್ಲಿ ಹರುಗೋಲ ಹರಿದಂತೆ, ಅಂಬಿಗನ ಕೊರಳ ಸುತ್ತಿ ಬಂದವರೆಲ್ಲರೂ ಉಭಯವು ಹೊಂದಿದಂತಾಯಿತ್ತು. ನೀ ಎನ್ನ ಬಟ್ಟೆ, ನಾ ನಿನ್ನ ಬಟ್ಟೆ. ಉಭಯವು ಬಂದ ಬಟ್ಟೆಯಾದೆವಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.