Index   ವಚನ - 20    Search  
 
ಹರಿಯ ಹತ್ತು ಭವದಲ್ಲಿ ಬರಿಸಿತ್ತು ಮಾಯೆ. ಬ್ರಹ್ಮನ ತಲೆಯ ಹೋಳುಮಾಡಿತ್ತು ಮಾಯೆ. ಇಂದ್ರಚಂದ್ರರಂಗಕ್ಕೆ ಭಂಗವಿಕ್ಕಿತ್ತು ಮಾಯೆ. ಗರುಡ ಗಂಧರ್ವರ ಬರಡುಮಾಡಿತ್ತು ಮಾಯೆ. ಕಿನ್ನರ ಕಿಂಪುರುಷರ ಚುನ್ನವಾಡಿತ್ತು ಮಾಯೆ. ಸಿದ್ಧಸಾಧಕರಿಗೆಲ್ಲ ಗುದ್ದಾಟವನಿಕ್ಕಿತ್ತು ಮಾಯೆ. ಮನುಮುನಿಗಳನೆಲ್ಲರ ಮನವ ಸೆಳಕೊಂಡು ಮರಣಕ್ಕೊಳಗುಮಾಡಿತ್ತು ಮಾಯೆ. ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರು ಲೋಕದವರನ್ನೆಲ್ಲ ಯೋನಿಮುಖದಲ್ಲಿ ಹರಿಹರಿದು ನುಂಗಿ ತೊತ್ತಳದುಳಿದಿತ್ತು ಮಾಯೆ. ಮುಕ್ಕಣ್ಣಾ, ನೀ ಮಾಡಿದ ಮಾಯವ ಕಂಡು ಬೆಕ್ಕನೆ ಬೆರಗಾದೆನಯ್ಯ ಅಖಂಡೇಶ್ವರಾ.