Index   ವಚನ - 86    Search  
 
ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ ಬ್ರಹ್ಮಂಗಸದಳ, ವಿಷ್ಣುವಿಂಗಸಾಧ್ಯ, ರುದ್ರಂಗಗೋಚರ ನೋಡಾ! ಅದೆಂತೆಂದೊಡೆ: ಮತ್ಸ್ಯಪುರಾಣ ಬ್ರಹ್ಮಣಾ ವಿಷ್ಣುನಾ ಚಾಪಿ ರುದ್ರೇಣ ಚ ಮುನೀಶ್ವರೈಃ | ಭಸ್ಮಧಾರಣಮಹಾತ್ಮ್ಯಂ ನ ಶಕ್ಯಂ ಪರಿಭಾಷಿತಮ್ || '' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯೆಂಬ ಪರತರ ಪರಂಜ್ಯೋತಿಸ್ವರೂಪು ನೀವಾದಿರಾಗಿ ಅಖಂಡೇಶ್ವರಾ, ಎನಗೆ ಶ್ರೀ ವಿಭೂತಿಯ ಸರ್ವಸಿದ್ಧಿಯಯ್ಯಾ.