ಅರಿಯದೆ ಒಂದು ವೇಳೆ 'ಓಂ ನಮಃಶಿವಾಯ' ಎಂದಡೆ
ಮರೆದು ಮಾಡಿದ ಹಿಂದೇಳುಜನ್ಮದ
ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ!
ಅರಿದೊಂದು ವೇಳೆ 'ಓಂ ನಮಃಶಿವಾಯ' ಎಂದಡೆ
ದುರಿತಸಂಕುಳವೆಲ್ಲ ದೂರಾಗಿಹವು ನೋಡಾ!
ಇದು ಕಾರಣ 'ಓಂ ನಮಃಶಿವಾಯ, ಓಂ ನಮಃಶಿವಾಯ'
ಎಂಬ ಶಿವಮಂತ್ರವನು ಜಪಿಸಿ,
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ
ಅಖಂಡೇಶ್ವರಾ.