ಓಂಕಾರವೆಂಬ ಮರಕ್ಕೆ ಷಟ್ಕೃತಿಯೆಂಬ ಶಾಖೆ ಪಸರಿಸಿ,
ಷಡಕ್ಷರಗಳೆಂಬ ತಳಿರು ಕೊನರಿ,
ಷಟ್ಸ್ಥಲಗಳೆಂಬ ಕುಸುಮಂಗಳಾಗಿ,
ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳ
ತಳೆದಿರ್ಪುದು ನೋಡಾ!
ಇದನು ನಾನು ಶ್ರುತಿಗುರುವಚನಸ್ವಾನುಭಾವಂಗಳಿಂದರಿದು
ಓಂಕಾರವೆಂಬ ವೃಕ್ಷವನೇರಿ 'ಓಂ ನಮಃಶಿವಾಯ'
'ಓಂ ನಮಃಶಿವಾಯ' 'ಓ ನಮಃಶಿವಾಯ' ಎಂದು
ಆ ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳನು
ಸವಿದು ನಿತ್ಯತೃಪ್ತನಾದೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Ōṅkāravemba marakke ṣaṭkr̥tiyemba śākhe pasarisi,
ṣaḍakṣaragaḷemba taḷiru konari,
ṣaṭsthalagaḷemba kusumaṅgaḷāgi,
ṣaḍuliṅgaṅgaḷemba mōkṣada madhuraphalaṅgaḷa
taḷedirpudu nōḍā!
Idanu nānu śrutiguruvacanasvānubhāvaṅgaḷindaridu
ōṅkāravemba vr̥kṣavanēri'ōṁ namaḥśivāya'
'ōṁ namaḥśivāya' 'ō namaḥśivāya' endu
ā ṣaḍuliṅgaṅgaḷemba mōkṣada madhuraphalaṅgaḷanu
savidu nityatr̥ptanādenayya akhaṇḍēśvarā.