Index   ವಚನ - 105    Search  
 
ಎನ್ನ ಷಡ್‍ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡಿಂದ್ರಿಯಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡ್‍ಭಾವಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡೂರ್ಮೆಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡ್ವರ್ಗಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಟ್‍ಕರಣಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಇದು ಕಾರಣ 'ಓಂ ನಮಃ ಶಿವಾಯ' 'ಓಂ ನಮಃ ಶಿವಾಯ' 'ಓಂ ನಮಃ ಶಿವಾಯ' ಎಂಬ ನಿಮ್ಮ ನಾಮಾಮೃತವನುಂಡು ನಿತ್ಯಮುಕ್ತನಾದೆನಯ್ಯ ಅಖಂಡೇಶ್ವರಾ.