ಎನ್ನ ಷಡ್ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡಿಂದ್ರಿಯಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ಭಾವಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡೂರ್ಮೆಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ವರ್ಗಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಟ್ಕರಣಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಇದು ಕಾರಣ 'ಓಂ ನಮಃ ಶಿವಾಯ' 'ಓಂ ನಮಃ ಶಿವಾಯ'
'ಓಂ ನಮಃ ಶಿವಾಯ' ಎಂಬ ನಿಮ್ಮ ನಾಮಾಮೃತವನುಂಡು
ನಿತ್ಯಮುಕ್ತನಾದೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Enna ṣaḍdhātugaḷella ṣaḍakṣaramantrasvarūpavāgi
tōrutippuvayya.
Enna ṣaḍindriyagaḷella ṣaḍakṣaramantrasvarūpavāgi
tōrutippuvayya.
Enna ṣaḍbhāvaṅgaḷella ṣaḍakṣaramantrasvarūpavāgi
tōrutippuvayya.
Enna ṣaḍūrmegaḷella ṣaḍakṣaramantrasvarūpavāgi
tōrutippuvayya.
Enna ṣaḍvargagaḷella ṣaḍakṣaramantrasvarūpavāgi
tōrutippuvayya.
Enna ṣaṭkaraṇaṅgaḷella ṣaḍakṣaramantrasvarūpavāgi
tōrutippuvayya.
Idu kāraṇa'ōṁ namaḥ śivāya' 'ōṁ namaḥ śivāya'
'ōṁ namaḥ śivāya' emba nim'ma nāmāmr̥tavanuṇḍu
nityamuktanādenayya akhaṇḍēśvarā.