Index   ವಚನ - 106    Search  
 
ಎನ್ನ ಸ್ಥೂಲತನುವೆಂಬ ಮನೆಯಲ್ಲಿ ಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ. ಎನ್ನ ಸೂಕ್ಷ್ಮ ತನುವೆಂಬ ಮನೆಯಲ್ಲಿ ಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ. ಎನ್ನ ಕಾರಣತನುವೆಂಬ ಮನೆಯಲ್ಲಿ ಜ್ಞಾನವೆಂಬ ಜ್ಞೋತಿಯ ತುಂಬಿದೆನಯ್ಯ. ಎನ್ನ ಒಳಹೊರಗೆ ತುಂಬಿ ಬೆಳಗುವ ಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ ಅಖಂಡೇಶ್ವರಾ.