ಬ್ರಾಹ್ಮಣನ ದರ್ಶನ ಪಾಪದ ಪುಂಜ ನೋಡಾ.
ಬ್ರಾಹ್ಮಣನಿಗೆ ಕೊಟ್ಟದಾನ ಅಪಾತ್ರ ದೋಷದಾರಿದ್ರ್ಯತೆ ನೋಡಾ.
ಶಿವಭಕ್ತಿಯಿಲ್ಲದ ಬ್ರಾಹ್ಮಣನಿಗೆ ವಂದನೆಯ ಮಾಡಿದರೆ
ಮುಂದೆ ಶುನಿ ಶೂಕರ ಬಸಿರಲ್ಲಿ ಬಪ್ಪುದು ತಪ್ಪದು ನೋಡಾ.
ಅಂದೆಂತೆಂದೊಡೆ:
ಶಿವಭಕ್ತಿವಿಹೀನಸ್ಯ ಬ್ರಾಹ್ಮಣಸ್ಯ ತು ದರ್ಶನಮ್ |
ಕೃತ್ವಾ ತು ಮಾನವೋ ಯಾತಿ ಕೀಟಜನ್ಮ ಪದೇ ಪದೇ ||''
ಎಂದುದಾಗಿ, ಇಂತಪ್ಪ ಹರಿಕುಲದ ಹಾರುವರ ಮುಖವ
ನೋಡಲಾಗದಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Brāhmaṇana darśana pāpada pun̄ja nōḍā.
Brāhmaṇanige koṭṭadāna apātra dōṣadāridryate nōḍā.
Śivabhaktiyillada brāhmaṇanige vandaneya māḍidare
munde śuni śūkara basiralli bappudu tappadu nōḍā.
Andentendoḍe:
Śivabhaktivihīnasya brāhmaṇasya tu darśanam |
kr̥tvā tu mānavō yāti kīṭajanma padē padē ||''
endudāgi, intappa harikulada hāruvara mukhava
nōḍalāgadayya akhaṇḍēśvarā.