ಜಂಗಮವೇ ಜಗದ್ಭರಿತನು ನೋಡಾ.
ಜಂಗಮವೇ ಜಗದೀಶ್ವರನು ನೋಡಾ.
ಜನನನಾಶ ಮರಣ ವಿರಹಿತನಾದ
ಒಬ್ಬ ಪರಮಜಂಗಮನ ದರ್ಶನವ ಮಾಡಿದರೆ
ಒಂದು ಕೋಟಿ ಲಿಂಗಂಗಳ ದರ್ಶನವಾದಂತೆ ನೋಡಾ.
ಆ ಜಂಗಮದ ಚರಣಕಮಲದ ಮೇಲೆ ಲಲಾಟವನ್ನಿಟ್ಟು
ಶರಣು ಮಾಡಿದರೆ ಶತಕೋಟಿ ದೋಷ ಪರಿಹಾರ ನೋಡಾ.
ಅದೆಂತೆಂದೊಡೆ:
ಪ್ರಭಾತೇ ಜಂಗಮೇ ದೃಷ್ಟೇ ಕೋಟಿಲಿಂಗಸ್ಯ ದರ್ಶನಮ್ |
ಲಲಾಟೇ ಚರಣಮಧ್ಯೇತು ಕೋಟಿಕರ್ಮ ವಿನಶ್ಯತಿ ||''
ಎಂದುದಾಗಿ, ಇಂತಪ್ಪ ಪರತರ ಪರಂಜ್ಯೋತಿ ಜಂಗಮವು
ನೀನೇ ಅಯ್ಯ ಅಖಂಡೇಶ್ವರಾ.