Index   ವಚನ - 230    Search  
 
ಪರಧನ ಪರಸ್ತ್ರೀಯರ ಬಿಟ್ಟಡೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ. ಇಹಪರ ಭೋಗಮೋಕ್ಷದ ಬಯಕೆಯ ಬಿಟ್ಟಡೆ ಚರಶೇಷವು ಸಾಧ್ಯವು ನೋಡಾ. ಕರಣಾದಿ ಗುಣಂಗಳಿಗೆ ಹರಿಯದಿರ್ದಡೆ ಅರುಹು ಸಾಧ್ಯವು ನೋಡಾ. ತಾನಿದಿರೆಂಬುಭಯವಳಿದಡೆ ನಿಜವು ಸಾಧ್ಯವು ನೋಡಾ ಅಖಂಡೇಶ್ವರಾ.