Index   ವಚನ - 245    Search  
 
ಬೇಕೆಂಬನಲ್ಲವಯ್ಯ ನಿಮ್ಮ ಶರಣ. ಬೇಡೆಂಬನಲ್ಲವಯ್ಯ ನಿಮ್ಮ ಶರಣ. ಲೋಕದ ನಡೆಯಂತೆ ನಡೆಯನಯ್ಯ ನಿಮ್ಮ ಶರಣ. ಕಾಕುನುಡಿ ಸಟೆ ಕುಟಿಲ ಕುಹಕ ವ್ಯಾಪಾರವ ಹೊದ್ದನಯ್ಯ ನಿಮ್ಮ ಶರಣ. ಏಕಲಿಂಗನಿಷ್ಠಾಪರನಾಗಿ ಆವಾವ ಪ್ರಪಂಚವನರಿಯನಯ್ಯ ನಿಮ್ಮ ಶರಣ ಅಖಂಡೇಶ್ವರಾ.