Index   ವಚನ - 247    Search  
 
ಎನ್ನ ಕಂಗಳು ನಿಮ್ಮ ನೋಡಲಿಚ್ಛಿಸುತಿರ್ಪುವು. ಎನ್ನ ಮನವು ನಿಮ್ಮ ನೆನಹ ಹಾರೈಸುತಿರ್ಪುದು. ಎನ್ನ ಭಾವವು ನಿಮ್ಮ ಬಯಕೆಯ ಬಯಸುತಿರ್ಪುದಯ್ಯ ಅಖಂಡೇಶ್ವರಾ.