Index   ವಚನ - 291    Search  
 
ಜಂಗಮಕ್ಕೆ ಮಾತಾಪಿತರಿಲ್ಲ. ಜಂಗಮಕ್ಕೆ ಜಾತಿಬಂಧುಗಳಿಲ್ಲ. ಜಂಗಮಕ್ಕೆ ನಾಮರೂಪುಗಳಿಲ್ಲ. ಜಂಗಮಕ್ಕೆ ಸೀಮೆಸಂಗಗಳಿಲ್ಲ. ಜಂಗಮಕ್ಕೆ ಕುಲಗೋತ್ರಗಳಿಲ್ಲ. ಜಂಗಮಕ್ಕೆ ಮಲಮಾಯಗಳಿಲ್ಲ ನೋಡಾ ಅಖಂಡೇಶ್ವರಾ.