Index   ವಚನ - 293    Search  
 
ಲಿಂಗಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವಲ್ಲ. ಜಂಗಮಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವು. ಸ್ಥಾವರಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವಲ್ಲ. ಜಂಗಮಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವು. ಅದೆಂತೆಂದೊಡೆ: ಪರಮರಹಸ್ಯ- “ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ | ಮಯ ತೃಪ್ತಿರುವಾದೇವಿ ಮಮ ಶ್ರೇಷ್ಠಂತು ಜಂಗಮ ||” ಮತ್ತಂ, ''ಯಥಾ ಭೇರುಂಡಪಕ್ಷೀ ತು ದವಿ ಮುಖೇನ ಪ್ರಭುಂಜತೆ| ತಥಾ ಚ ಉಮಾದೇವಿ ಮಮ ತೃಪ್ತಿಸ್ತು ಜಂಗಮಃ ||” ಎಂದುದಾಗಿ, ಸ್ಥಾವರಕ್ಕೆ ಅರ್ಪಿಸಿದ ನೈವೇದ್ಯವು ಶಿವನಿಗೆ ತೃಪ್ತಿಯಾಗದು. ಜಂಗಮಕ್ಕೆ ಅರ್ಪಿಸಿದ ನೈವೇದ್ಯವು ಶಿವನಿಗೆ ಸದಾಕಾಲದಲ್ಲಿಯೂ ತೃಪ್ತಿಯಹುದು ನೋಡಾ ಅಖಂಡೇಶ್ವರಾ.