Index   ವಚನ - 297    Search  
 
ಪರದೈವವ ಪೂಜಿಸುವಾತ ಸದ್ ಭಕ್ತನೆ? ಅಲ್ಲಲ್ಲ. ಪರಸಮಯವ ಬಳಸುವಾತ ಸದ್ ಭಕ್ತನೆ? ಅಲ್ಲಲ್ಲ. ಪರಸ್ತ್ರೀಯರಿಗಳಪುವಾತ ಸದ್ ಭಕ್ತನೆ? ಅಲ್ಲಲ್ಲ. ಪರರೊಡವೆಯ ಅಪಹರಿಸಿಕೊಂಬಾತ ಸದ್ ಭಕ್ತನೆ? ಅಲ್ಲಲ್ಲ. ಇಂತೀ ದುರಾಚಾರದಲ್ಲಿ ನಡೆದು ದುಃಖಕ್ಕೆ ಈಡಾಗಿ ಹೋಗುವ ಕತ್ತೆ ಮೂಳ ಹೊಲೆಯರ ಸದ್ ಭಕ್ತರೆಂದಡೆ ಭವ ಹಿಂಗದಯ್ಯ ಅಖಂಡೇಶ್ವರಾ.