Index   ವಚನ - 308    Search  
 
ದಯವಿರಬೇಕು ಸಕಲಪ್ರಾಣಿಗಳಲ್ಲಿ ಭಯವಿರಬೇಕು ಗುರುಲಿಂಗಜಂಗಮದಲ್ಲಿ, ಸ್ವಯವಿರಬೇಕು ಸಕಲಗುಣಂಗಳಲ್ಲಿ, ನಯವಿರಬೇಕು ನುಡಿಗಡಣದಲ್ಲಿ, ಇಂತೀ ಗುಣವಿಲ್ಲದವರ ಕಂಡರೆ ಸೊಗಸದಯ್ಯ ಎನಗೆ ಅಖಂಡೇಶ್ವರಾ.