Index   ವಚನ - 310    Search  
 
ಬಲ್ಲರೆ ಬಲ್ಲರೆಂಬೆನು, ಲಿಂಗಜಂಗಮ ಒಂದೇ ಎಂದು ತಿಳಿದು ನಡೆಯಬಲ್ಲರೆ. ಬಲ್ಲರೆ ಬಲ್ಲರೆಂಬೆನು, ಅಂಗಲಿಂಗದ ಕೀಲವನರಿದು ಕೂಡಬಲ್ಲರೆ. ಬಲ್ಲರೆ ಬಲ್ಲರೆಂಬೆನು, ಜ್ಞಾನ ಸುಜ್ಞಾನದ ನೆಲೆಯನರಿಯಬಲ್ಲರೆ. ಬಲ್ಲರೆ ಬಲ್ಲರೆಂಬೆನು, ನಿತ್ಯಾನಿತ್ಯವ ಬೇರ್ಪಡಿಸಿ ನಿಜವ ಹಿಡಿಯಬಲ್ಲರೆ. ಇಂತೀ ಬಲ್ಲವಿಕೆಯ ಬಗೆಯನರಿಯದೆ ಸೊಲ್ಲು ಸೊಲ್ಲಿಗೆ ಮಚ್ಚರಿಸಿ ಕರಣಮಥನ ಕರ್ಕಶದಿಂದ ಹೋರುವವರು ಸಲ್ಲರೆಂಬೆನಯ್ಯ ನಿಜಪಥಕ್ಕೆ ಅಖಂಡೇಶ್ವರಾ.