Index   ವಚನ - 312    Search  
 
ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು. ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು. ವೃತ್ತಿಜ್ಞಾನವಳಿದು ಚಿತ್ತದ ಕೊನೆಯ ಮೊನೆಯಲ್ಲಿ ನಿತ್ಯಲಿಂಗದ ನೆನಹು ತುಂಬಿ ಸುಳಿಯಬಲ್ಲರೆ ಅಚ್ಚಶರಣನೆಂಬೆನಯ್ಯ ಅಖಂಡೇಶ್ವರಾ.