Index   ವಚನ - 320    Search  
 
ಹೊನ್ನು ಬ್ರಹ್ಮನ ಹಂಗು, ಹೆಣ್ಣು ವಿಷ್ಣುವಿನ ಹಂಗು, ಮಣ್ಣು ರುದ್ರನ ಹಂಗು. ಇಂತೀ ತ್ರಿಮೂರ್ತಿಗಳ ಹಂಗು ಹರಿದು ಲಿಂಗವೇ ಗೂಡಾಗಿರ್ಪ ಮಹಾಶರಣರ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.