Index   ವಚನ - 336    Search  
 
ಮಡುವಿನಗ್ಗಣಿ, ಗಿಡದ ಹೂವು, ಒಡಲಿಗೆ ಅನ್ನ, ನುಡಿನುಡಿಗೆ ಮೃಡನ ಸ್ಮರಣೆ ಇರಲು, ಜಡರ ಹಂಗೇಕೆ ಹೇಳಾ. ಶಿವಧ್ಯಾನ ಶಿವಚಿಂತೆ ಭಿಕ್ಷಾಹಾರ ಏಕಾಂತವಾಸಿಯ ಮಾಡಯ್ಯ ಎನ್ನ ಅಖಂಡೇಶ್ವರಾ.